
23rd November 2024
ಕಲಬುರಗಿ,ನ.೨೨(ಕ.ವಾ) ಮುಂಬೈನ ಸೋಲಿಗೆ ಸಮರ್ಥ ಪ್ರತಿಕಾರ ನೀಡುವಲ್ಲಿ ಅಮೆರಿಕನ್ ಆಟಗಾರ ನಿಕ್ ಚಾಪೆಲ್ ಯಶಸ್ವಿಯಾದರು. ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ನಿಕ್ ಚಾಪೆಲ್ ತಮ್ಮ ಕಳೆದ ವಾರ ಮುಂಬೈನಲ್ಲಿ ಕರಣ್ ಸಿಂಗ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದರು, ಇದಕ್ಕೆ ಸ್ಪಷ್ಟ ತಿರುಗೇಟು ನೀಡುವಲ್ಲಿ ತಮ್ಮ ಪೂರ್ಣ ಶ್ರಮ ಪ್ರಯೋಗಿಸಿದರು. ಶುಕ್ರವಾರ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಟೆನಿಸ್ ಟೂರ್ನಿಯ ಆರಂಭಿಕ ಕ್ವಾರ್ಟರ್ ಫೈನಲ್ ಪಂದ್ಯ ನೋಡುಗರ್ನನು ಕುರ್ಚಿಯ ತುದಿಗೆ ತಂದು ಕೂರಿಸಿತು. ೩೨ ವರ್ಷದ ಎಡಗೈ ಆಟಗಾರ ನಿಕ್ ಚಾಪೆಲ್ ತಮ್ಮ ರಾಕೆಟ್ ಪ್ರಭಾವ ಬಳಸಿ ಭಾರತೀಯ ಆಟಗಾರನ ವಿರುದ್ಧ ೭-೫, ೬- ೨ ಅಂಕಗಳ ಮೂಲಕಗೆಲುವುಸಾಧಿಸಿದರು ಜೊತೆಗೆ ಸೆಮಿಫೈನಲ್ ಕಡೆಗೆ ಹೆಜ್ಜೆ ಹಾಕಿದರು.
ಪ್ರತಿಷ್ಠಿತ ೨೫, ೦೦೦ ಡಾಲರ್ ಮೊತ್ತದ ಪಂದ್ಯಾವಳಿಯಲ್ಲಿ ರಷ್ಯಾದ ಬೊಗ್ಡಾನ್ ಬೊಬ್ರೋವ್ ತಮ್ಮ ಎದುರಾಳಿ ಆರ್ಯನ್ ಷಾ ವಿರುದ್ಧ ನಿರಾಯಾಸದ ಗೆಲುವು ಸಾಧಿಸಿದರು, ಷಾ ವಿರುದ್ಧ ೭-೫, ೬-೩ ಅಂತರದ ವಿಜಯ ಘೋಷಿಸಿ, ಅಗ್ರ ಶ್ರೇಯಾಂಕವನ್ನು ಪಡೆದರು.ಸೆಮಿಫೈನಲ್ ಮತ್ತೊಂದು ರಾಕೆಟ್ ಕದನದಲ್ಲಿ ಅಗ್ರ ಶ್ರೇಯಾಂಕ್ ಖುಮೊಯುನ್ ಸುಲ್ತಾನೋವ್ ಭಾರತದ ದೇವ್ ಜಾವಿಯಾ ವಿರುದ್ಧ ಜಯ ದಾಖಲಿಸಿದರು. ಉಜ್ಬೇಕಿಸ್ಥಾನದ ಪಟು ರಷ್ಯಾದ ಮ್ಯಾಕ್ಸಿಮ್ ಝಕೋವ್ ವಿರುದ್ಧ ನೇರ ಸೆಟ್ ಗಳಲ್ಲಿ ( ೬-೨, ೬-೩) ಅಂತರದಲ್ಲಿ ಜಯಗಳಿಸಿದರು. ಈ ನಡುವೆ ಜಾವಿಯಾ ಒಂದು ಪಂದ್ಯವನ್ನಷ್ಟೆ ಆಡಿದರು, ಎದುರಾಳಿ ಸಿದ್ದಾರ್ಥ್ ರಾವತ್ ತಲೆತಿರುಗುವಿಕೆ ಸಮಸ್ಯೆಯಿಂದ ವೈದ್ಯರ ಸಲಹೆ ಪಡೆದು ಆಟದಿಂದ ನಿರ್ಗಮಿಸಿದರು.
ನಿಕ್ ಚಾಪೆಲ್ ಹಾಗೂ ಕರಣ್ ಸಿಂಗ್ ಪಂದ್ಯದಲ್ಲಿ ಚಾಪೆಲ್ ಉತ್ತಮ ಆರಂಭವನ್ನೇ ಪ್ರದರ್ಶಿಸಿದರು, ಆದರೆ ಕರಣ್ ಸಿಂಗ್ ಆಕ್ರಮಣಕಾರಿ ಹೊಡೆತಗಳನ್ನು ಸ್ವಾಗತಿಸುತ್ತಲೇ ಚಾಪೆಲ್ ವಿರುದ್ಧ ಆರ್ಭಟಿಸಿದರು. ಪಂದ್ಯದ ವಿವಿಧ ಹಂತಗಳಲ್ಲ ತಪ್ಪುಗಳ ಸುಳಿಗೆ ಸಿಲುಕಿದ ಕರಣ್ ಸುಲಭದ ಸರ್ವ್ ಮೂಲಕ ಚಾಪೆಲ್ ಗೆಲುವಿಗೆ ದಾರಿ ಮಾಡಿಕೊಟ್ಟರು. ಬೇಗ ಪಾಯಿಂಟ್ ಪಡೆಯಲು ಯತ್ನಿಸಿದ ಇಬ್ಬರ ಪೈಕಿ ನಾಲ್ಕನೇ ಪಂದ್ಯದಲ್ಲಿ ಚಾಪೆಲ್ ಗೆ ಬ್ರೇಕ್ ಮಾಡಲು ಅವಕಾಶ ಮಾಡಿಕೊಡಲು ಡ್ರಾಪ್ ಶಾಟ್ ಗಳನ್ನು ಆಡಿದರು, ನಿಪುಣ ಚಾಪೆಲ್ ಕರಣ್ ಎಲ್ಲಾ ದೋಷಗಳನ್ನು ಬಳಸಿಕೊಂಡು ಮುನ್ನುಗ್ಗಿದರು.
ಕರಣ್ ಮೊದಲ ಸೆಟ್ ಸೋಲು ಯಾವುದೇ ಪರಿಣಾಮ ಬೀರದಂತೆ ಚಾಪೆಲ್ ಆರನೇ ಗೇಮ್ ನಲ್ಲಿ ಡಬಲ್ ಫಾಲ್ಟ್ ಗಳು ಮತ್ತು ಬ್ಯಾಕ್ ಹ್ಯಾಂಡ್ ಮೂಲಕ ಚಾಪೆಲ್ ೪-೨ ಮುನ್ನಡೆ ಸಾಧಿಸಿದರು. ಎರಡೂ ಪಾರ್ಶ್ವಗಳಿಂದ ಹೊಡೆತ ನೀಡಿ, ಏಳನೇ ಗೇಮ್ ನಲ್ಲಿ ಫೋರ್ ಹ್ಯಾಂಡ್ ಡೌನ್ ವಿಜೇತರನ್ನು ಆಯ್ಕೆ ಮಾಡಲಾಯಿತು, ನಿಕ್ ಚಾಪೆಲ್ ಎಂಟನೇ ಗೇಮ್ ನಲ್ಲಿ ಕರಣ್ ಮಣಿಸಿ ತಮ್ಮ ಸೆಮೀಸ್ ಸ್ಥಾನವನ್ನು ಗಟ್ಟಿಮಾಡಿಕೊಂಡರು. ೆಮಿಫೈನಲ್ ಲೈನ್ ಅಪ್ : ಅಮೆರಿಕದ ನಿಕ್ ಚಾಪೆಲ್ ಮತ್ತು ರಷ್ಯಾದ ಬೊಗ್ಡಾನ್ ಬೊಬ್ರೋವ್, ಉಜ್ಬೇಕಿಸ್ಥಾನದ ಖುಮೊಯುನ್ ಸುಲ್ತಾನೋವ್ ಮತ್ತು ದೇವ್ ಜಾವಿಯಾ.
ಫಲಿತಾಂಶಗಳು (ಉಲ್ಲೇಖಿಸದ ಹೊರತು ಭಾರತೀಯರು): ಸಿಂಗಲ್ಸ್ (ಕ್ವಾರ್ಟರ್ ಪೈನಲ್) : ೬- ನಿಕ್ ಚಾಪೆಲ್ (ಅಮೆರಿಕ) ೪-ಕರಣ್ ಸಿಂಗ್ ಅವರ ವಿರುದ್ಧ ೭-೫, ೬-೨ ಅಂತರದಲ್ಲಿ ಗೆಲುವು ಸಾಧಿಸಿದರು. ೭- ದೇವ್ ಜಾವಿಯಾ ತಮ್ಮ ಎದುರಾಳಿ ಸಿದ್ದಾರ್ಥ್ ರಾವತ್ ನಿರ್ಗಮನದೊಂದಿಗೆ ೧-೦ ಅಂತರದಲ್ಲಿ ಗೆಲವು ದಾಖಲಿಸಿದರು. ೨- ರಷ್ಯನ್ ಆಟಗಾರ ಬೊಗ್ಡಾನ್ ಬೊಬ್ರೋವ್ ಆರ್ಯನ್ ಷಾ ಅವರನ್ನು ೭-೫, ೬-೩ ಅಂತರದಲ್ಲಿ ಮಣಿಸಿದರು. ೧- ಖುಮೊಯುನ್ ಸುಲ್ತಾನೋವ್ (ಉಜ್ಬೇಕಿಸ್ಥಾನ) ಅವರು ರಷ್ಯದ ಮ್ಯಾಕ್ಸಿಮ್ ಝುಕೋವ್ ವಿರುದ್ಧ ೬-೨, ೬-೩ ರ ಗೆಲುವು ಘೋಷಿಸಿದರು.
ಮಕ್ಕಳ ಕಲಾ ಶಿಬಿರ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ನಾಯಕ ಸ್ಟೂಡೆಂಟ್ ಫೆಡರೇಶನ್ ಗೋಕಾಕ್ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಗೋಕಾಕ್
ಮಾರಿಹಾಳ ಗ್ರಾಮದ “ವಿವಿಧೋದ್ದೇಶಗಳ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ”ವತಿಯಿಂದ ಸಂಘದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ನಬಾರ್ಡ್ ಯೋಜನೆಯ ಪ್ರತಿ ಶತ 3% ಬಡ್ಡಿ ದರದಲ್ಲಿ ಟ್ರ್ಯಾಕ್ಟರಗಳನ್ನು ವಿತರಿಸಲಾಯಿತು